ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟಿಯರ ಪೈಕಿ ನಟಿ ಕಾರುಣ್ಯ ರಾಮ್ ಕೂಡ ಒಬ್ಬರು. ತಮ್ಮ ಅಭಿನಯ ಹಾಗೂ ತಮ್ಮ ಗ್ಲಾಮರ್ ನ ಮೂಲಕ ನಟಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಬೆಳ್ಳಿತೆರೆ ಜೊತೆಗೆ ನಟಿ ಕಿರುತೆರೆಯಲ್ಲಿ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇನ್ನು ನಟಿ ಕೊನೆಯದಾಗಿ 2019 ರಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದರು, ಇದೀಗ ನಟಿ ಒಂದು ವಿಭಿನ್ನವಾದ ಪಾತ್ರದ ಮೂಲಕ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈ ಮೂಲಕ ನಟಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ನಟಿ ಕಾರುಣ್ಯ ರಾಮ್ 2010 ರಲ್ಲಿ ಸೀನ ಸಿನಿಮಾದ ಮೂಲಕ ನಟಿಯಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಮತ್ತೊಂದ್ ಮದುವೇನಾ, ವಜ್ರಕಾಯ, ಕಿರಗೂರಿನ ಗೈಯಾಳಿಗಳು, ಇನ್ನು ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ನಟಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ನಟಿ ಕಾರುಣ್ಯ ರಾಮ್ ಕಿಚ್ಚ ಸುದೀಪ್ ಅವರ ಬಿಗ್ ಬಾಸ್ ಸೀಸನ್ 4 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ತಮ್ಮ ಉತ್ತಮ ಆಟದ ಮೂಲಕ ನಟಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಇನ್ನು ಬಿಗ್ ಮನೆಯಿಂದ ಹೊರ ಬಂದ ನಂತರ ನಟಿ ಸಾಕಷ್ಟು ಬ್ಯುಸಿಯಾಗಿದ್ದಾರೆ.
ಇನ್ನು ನಟಿ 2019 ರಲ್ಲಿ ಕೊನೆಯದಾಗಿ ಮನೆ ಮಾರಾಟಕ್ಕಿದೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ ನಟಿ ಬೆಳ್ಳಿತೆರೆಯ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ನಟಿ ಪೆಟ್ರೋಮ್ಯಾಕ್ಸ್ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.
ಪೆಟ್ರೋಮ್ಯಾಕ್ಸ್ ಸಿನಿಮಾ ಒಂದು ಹಾಸ್ಯ ಸಿನಿಮಾ ಆಗಿದ್ದು, ಈ ಸಿನಿಮಾದಲ್ಲಿ ನಟಿ ಕಾರುಣ್ಯ ರಾಮ್ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ನಟಿ ಕಾರುಣ್ಯ ರಾಮ್ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಒಬ್ಬ ಬ್ಯುಟಿಶಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ನೆನ್ನೆ ನಟಿ ಕಾರುಣ್ಯ ರಾಮ್ ಅವರ ಹುಟ್ಟುಹಬ್ಬ ಆಗಿದ್ದು, ಚಿತ್ರರಂಗದವರು ಸೇರಿದಂತೆ ಅವರ ಸಾಕಷ್ಟು ಅಭಿಮಾನಿಗಳು ನಟಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಇನ್ನು ನಟಿಗೆ ಅವರ ಸಾಕಷ್ಟು ಅಭಿಮಾನಿಗಳು ಉಡುಗೊರೆಗಳನ್ನು ಸಹ ಕಳುಹಿಸಿದ್ದಾರೆ.
ಇನ್ನು ನಟಿ ಕಾರುಣ್ಯ ರಾಮ್ ಅವರು ತಮ್ಮ ಹುಟ್ಟುಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಿಸಿಕೊಂಡಿದ್ದು, ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ನಿಮಗೂ ಕೂಡ ಕಾರುಣ್ಯ ರಾಮ್ ಇಷ್ಟವಾಗಿದ್ದಾರೆ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿ..