ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮ ಈಗಾಗಲೇ ಶುರುವಾಗಿ ಎಲ್ಲಾ ವೀಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇನ್ನು ಶುರುವಾದ ಮೊದಲ ದಿನದಿಂದಲೇ ಸ್ಪರ್ಧಿಗಳು ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಜನರಿಗೆ ಅವರವರ ಫೇವರೇಟ್ ಸ್ಪರ್ಧಿಗಳು ಸಹ ಆಗಿದ್ದಾರೆ.
ಇನ್ನು ಬಿಗ್ ಬಾಸ್ ಓಟಿಟಿ ಕನ್ನಡದಲ್ಲಿ ತಮ್ಮ ಮಾತುಗಳು ಹಾಗೂ ಇನ್ನಿತರ ಕಾರ್ಯಗಳಿಂದ ಸಕತ್ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ. ಇದೀಗ ಬಿಗ್ ಮನೆಯಲ್ಲಿ ಸೋನು ಗೌಡ ಗೆ ಪ್ರೀತಿ ಶುರುವಾಗಿದೆ. ಈ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ.
ಇನ್ನು ಇದೀಗ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಎಲ್ಲಾ ಸ್ಪರ್ಧಿಗಳಿಗೂ ತಮ್ಮ ಒಂದು ವಾರದ ಎಸ್ಪಿರಿಯನ್ಸ್ ಹಾಗೂ ಯಾರಿಗಾದರೂ ಯಾವುದಾದರೂ ಪ್ರಶ್ನೆ ಕೇಳುವುದಾದರೆ ಅಥವಾ ಯಾರಿಗಾದರೂ ಯಾವುದನ್ನು ಬದಲಾಯಿಸಿಕೊಳ್ಳಬೇಕು ಎನ್ನುವುದು ಮಾತನಾಡಲು ಟಾಸ್ಕ್ ನ ಮೂಲಕ ಒಂದು ಅವಕಾಶ ಮಾಡಿಕೊಟ್ಟಿದ್ದರು.
ಇನ್ನು ಈ ವೇಳೆ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಎಸ್ಪಿರಿಯನ್ಸ್ ಹಾಗೂ ತಮ್ಮ ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನು ಈ ನಡುವೆ ಸೋನು ಗೌಡ ಅವರು ತಮ್ಮ ಮಾತುಗಳಿಂದ ಮನೆಯ ಸದಸ್ಯರನ್ನು ಇಂಪ್ರೆಸ್ ಮಾಡಿದ್ದಾರೆ.
ನಾವು ಇಲ್ಲಿ ಗೇಮ್ ಆಡಕ್ಕೆ ಬಂದಿರೋದು, ನಾವು ಇಲ್ಲಿ ಫ್ರೆಂಡ್ ಶಿಪ್ ಮಾಡಕ್ಕೆ ಅಥವಾ ರಿಲೇಷನ್ ಶಿಪ್ ಮೆಂಟೈನ್ ಮಾಡಕ್ಕೆ ಬಂದಿಲ್ಲ. ಯಾರೋ ಏನೋ ಅಂದುಕೊಳ್ಳುತ್ತಾರೆ ಅಂತ ನಾನು ಬದುಕ್ಕಲ್ಲ. ನನಗೆ ಹೇಗೆ ಇಷ್ಟ ಬರುತ್ತೋ ನಾನು ಹಾಗೆ ಬದುಕುತ್ತೇನೆ.
ನಮಗೆ ಕಷ್ಟ ಅಂತ ಬಂದರೆ ಯಾರು ಬಂದು ನಮಗೆ ಸಹಾಯ ಮಾಡುವುದಿಲ್ಲ. ನಮಗೆ ನಾವೇ ಎಲ್ಲವನ್ನು ಎದುರಿಸಬೇಕು. ನಾವು ತಿಂತ್ತಾ ಇರೋದು ನಮ್ಮ ಮನೆಯ ಊಟ ನಾವ್ ಯಾಕೆ ಬೇರೆಯವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಕು.
ನಾನು ಇಲ್ಲಿ ಇರೋ ಅಷ್ಟು ದಿನ ನಾನು ನಾನಾಗಿ ಇರ್ತೀನಿ ಹಾಗೂ ನಾನು ಇಲ್ಲಿಯ ಒಂದೊಂದು ನಿಮಿಷವನ್ನು ಎಂಜಾಯ್ ಮಾಡ್ತೀನಿ ಎಂದಿದ್ದಾರೆ ಸೋನು. ಈ ಮಾತುಗಳನ್ನ ಕೇಳಿ ಮನೆಯವರೆಲ್ಲಾ ಇಂಪ್ರೆಸ್ ಆಗಿದ್ದಾರೆ.
ಇನ್ನು ಮೊದಲ ವಾರದ ಎಲಿಮಿನೇಷನ್ ನಿಂದ ಕಿರಣ್ ಎಲಿಮಿನೇಟ್ ಆಗಿದ್ದು, ಸೋನು ಸೇವ್ ಆಗಿದ್ದಾರೆ. ಹೀಗೆ ಸೋನು ಗೌಡ ಅವರು ಬಿಗ್ ಮನೆಯಲ್ಲಿ ಇನ್ನ ಹೆಚ್ಚು ದಿನಗಳ ಕಾಲ ಇರಲಿ ಎಂದು ಹಾರೈಸಿ. ನಿಮಗೂ ಸೋನು ಗೌಡ ಇಷ್ಟವಾದರೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.