ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಶುರುವಾಗಿ ಇದೀಗ ಒಂದು ವಾರ ಕಳೆದಿದೆ. ಈ ಒಂದು ವಾರದಲ್ಲಿ ಕೆಲವರು ಈಗಾಗಲೇ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಈ ನಡುವೆ ಈ ವಾರ ಇಬ್ಬರೂ ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ.
ಹೌದು ಕನ್ನಡದ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಪ್ರಸಾರವಾದ ಮೊದಲ ದಿನದಿಂದಲೂ ವಿಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತುದೆ. ಸ್ಪರ್ಧಿಗಳು ಕೂಡ ದಿನದಿಂದ ದಿನಕ್ಕೆ ಅವರದ್ದೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಿಂದ ಕಿರಣ್ ಹೊರ ಬಂದಿದ್ದಾರೆ. ಹೌದು ಈ ವಾರ ಕಿಚ್ಚ ಸುದೀಪ್ ಎಲ್ಲರನ್ನು ಮಾತನಾಡಿಸಿ, ಕೆಲವರಿಗೆ ಅವರ ತಪ್ಪುಗಳನ್ನು ತಿದ್ದಿ ಹೇಳಿದರು. ಇನ್ನು ಕೆಲವರಿಗೆ ತಾವು ಮನೆಯಲ್ಲಿ ಇರುವ ಬಗ್ಗೆ ಕಿಚ್ಚ ಮೆಚ್ಚುಗೆ ಕೂಡ ಸೂಚಿಸಿದರು.
ಇನ್ನು ಲೋಕೇಶ್ ಅವರ ಆರೋಗ್ಯದಲ್ಲಿ ಏರು ಪೇರಾದ ಕಾರಣ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿತ್ತು. ಇನ್ನು ವೈದ್ಯರ ಸಲಹೆ ಮೇರೆಗೆ ಲೋಕೇಶ್ ಅವರನ್ನು ತಾತ್ಕಾಲಿಕವಾಗಿ ಮನೆಯಿಂದ ಹೊರಗೆ ಕಳುಹಿಸಲಾಗಿದೆ.
ಲೋಕೇಶ್ ಆರೋಗ್ಯದಲ್ಲಿ ಸುಧಾರಣೆ ಕಂಡ ನಂತರ ಅವರು ಮತ್ತೆ ಬುಗ್ ಬಾಸ್ ಮನೆಗೆ ರೀ ಎಂಟ್ರಿ ಕೊಡುವುದಾಗಿ ಹೇಳಲಾಗುತ್ತಿದೆ. ಇನ್ನು ಈ ವಾರ ಮೊದಲ ಎವಿಕ್ಷನ್ ನಡೆದಿದ್ದು, ಇದರಲ್ಲಿ ಕಿರಣ್ ಬೇರೆ ಎಲ್ಲಾ ಸ್ಪರ್ಧಿಗಳಿಗಿಂತ ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ಬಂದಿದ್ದಾರೆ.
ಕಿರಣ್ ಬಿಗ್ ಮನೆಯಿಂದ ಹೊರ ಬಂದ ನಂತರ ಅವರನ್ನು ಸಾಕಷ್ಟು ಮಧ್ಯಮಗಳು ಇಂಟರ್ಯ್ಯ್ ಮಾಡಿದ್ದಾರೆ. ಇನ್ನು ಬಿಗ್ ಮನೆಯಲ್ಲಿ ತನ್ನ ಜರ್ನು ಹೇಗಿತ್ತು ಹಾಗೂ ಯಾವ ಯಾವ ಸ್ಪರ್ಧಿಗಳು ಹೇಗೆ ಎನ್ನುವುದರ ಬಗ್ಗೆ ಕಿರಣ್ ನೇರವಾಗಿ ಮಾತನಾಡಿದ್ದಾರೆ.
ಹೀಗೆ ಸೋನು ಬಗ್ಗೆ ಮಾತನಾಡಿರುವ ಕಿರಣ್ ಸೋನು ಬಗ್ಗೆ ಏನು ಹೇಳಲು ಇಲ್ಲ. ಅವಳು ಏನು ಮಾತನಾಡುತ್ತಾಳೋ ಅವಳಿಗೆ ಗೊತ್ತಿಲ್ಲ ಎಂದಿದ್ದಾರೆ. ನಂತರ ಸೋನು ರೀತಿ ಮಾತನಾಡಿ ಸೋನುಳನ್ನು ಕಿರಣ್ ಇಮಿಟೇಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ.