ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್, ಅಣ್ಣಾವ್ರ ನಟನೆಯ ಬಗ್ಗೆ ಬೇರೆ ಏನು ಸಹ ಮಾತನಾಡುವುದು ಬೇಕಿಲ್ಲ, ಏಕೆಂದರೆ ಅಣ್ಣಾವ್ರು ನಟಿಸಲು ನಿಂತರೆ ಆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಾರೆ. ಇದನ್ನು ನೋಡಿ ಎಲ್ಲಾ ಅಭಿಮಾನಿಗಳು ಮಂತ್ರಮುಗ್ದರಾಗುತ್ತಾರೆ.
ಇಂತಹ ಅದ್ಬುತ ವ್ಯಕ್ತಿಯ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಈ ಮೂವರು ಸಹ ಸಿನಿಮಾರಂಗದಲ್ಲಿ ತಂದೆಯಂತೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ನಟನೆಯ ಜೊತೆಗೆ ಅವರ ಅದರ್ಶಗಳಿಗೆ ರಾಜ್ ಕುಟುಂಬ ಯಾವಾಗಲೂ ಫ್ಹೇಮಸ್.
ಇನ್ನು ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ನಮ್ಮ ಕರುನಾಡ ಮುತ್ತು ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಬಿಟ್ಟು ಹೋದರು. ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ ಸುಮಾರು ತಿಂಗಳುಗಳು ಕಳೆದರೂ ಇನ್ನು ಆ ನೋವಿನಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ.
ಇನ್ನು ಅಪ್ಪು ಅವರು ಸಾಯುವ ಮುನ್ನ ಅನೇಕ ಕನಸ್ಸುಗಳನ್ನು ಕಂಡಿದ್ದರು, ಆ ಎಲ್ಲಾ ಕನಸ್ಸುಗಳನ್ನು ಒಂದೊಂದಾಗಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ಶಿವ ರಾಜ್ ಕುಮಾರ್ ನೆರವೇರಿಸುತ್ತಿದ್ದಾರೆ. ಇನ್ನು ಅಪ್ಪು ಅಭಿಮಾನಿಗಳು ಸಹ ಅಪ್ಪು ಹೆಸರಿನಲ್ಲಿ ದಿನಕೊಂದು ಪುಣ್ಯದ ಕೆಲಸ ಮಾಡುತ್ತಿದ್ದಾರೆ.
ಇನ್ನು ಅಪ್ಪು ಅವರ ಕನಸ್ಸುಗಳಲ್ಲಿ ಒಂದು ಡಾ. ರಾಜ್ ಕುಮಾರ್ ಅವರು ಹುಟ್ಟಿ ಬೆಳೆದಿದ್ದ ಮನೆಯನ್ನು ಸರಿ ಮಾಡಿಸಬೇಕು ಎನ್ನುವುದು. ಗಾಜನೂರಿನ ಬಳಿ ಡಾ. ರಾಜ್ ಕುಮಾರ್ ಅವರ ಮನೆಯಿದೆ. ಆ ಮನೆ ಅಪ್ಪು ಅವರಿಗೆ ತುಂಬಾ ಇಷ್ಟವಾದ ಮನೆಯಾಗಿತ್ತು.
ಅಪ್ಪು ಅವರ ಮನಸ್ಸಿಗೆ ಯಾವಾಗಲೂ ಹತ್ತಿರವಾದಂತಹ ಮನೆ ಅದು. ಇನ್ನು ಅಪ್ಪು ನಿಧನದ ನಂತರ ದೊಡ್ಮನೆಯವರು ಆ ಮನೆಯನ್ನು ಸರಿ ಮಾಡಿಸಿದ್ದಾರೆ. ಇನ್ನು ಈ ಮನೆಗೆ ಆಗಾಗ ಶಿವಣ್ಣ ಹಾಗೂ ರಾಘಣ್ಣ ಭೇಟಿ ನೀಡುತ್ತಿರುತ್ತಾರೆ.
ಇನ್ನು ಇದೀಗ ರಾಘಣ್ಣ ಗಾಜನೂರಿನ ಮನೆಗೆ ಭೇಟಿ ನೀಡಿದ್ದು, ಅಲ್ಲಿನ ಒಂದು ವಿಡಿಯೋ ಇದೀಗ ಸಕತ್ ವೈರಲ್ ಆಗುತ್ತಿದೆ. ಹೌದು ಈ ವಿಡಿಯೋದಲ್ಲಿ ರಾಘಣ್ಣ ಮನೆಯ ಹೊರಗೆ ಬರುವಾಗ ಅಥವಾ ಒಳಗೆ ಒಗುವಾಗ ಆಗಿನ ಕಾಲದಲ್ಲಿ ಮನೆಯ ಹೊಸಲನ್ನು ಚಿಕ್ಕದಾಗಿ ಇಟ್ಟಿದರು.
ಏಕೆಂದರೆ ಮನುಷ್ಯ ತಗ್ಗಿ ಬಗ್ಗಿ ನಡೆಯಬೇಕು ಎಂದು ನಾವು ಯಾವಾಗಲೂ ತಗ್ಗಿ ಬಗ್ಗಿ ನಡೆಯಬೇಕು ಎನ್ನುವ ಮಾತುಗಳನ್ನು ಆಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.