ಕನ್ನಡದ ಟಾಪ್ ನಟಿಯರ ಪೈಕಿ ನಟಿ ಮೇಘನಾ ರಾಜ್ ಕೂಡ ಒಬ್ಬರು. ತಮ್ಮ ಅಧ್ಭುತ ನಟನೆಯ ಮೂಲಕ ನಟಿ ಮೇಘನಾ ರಾಜ್ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಜೊತೆಗೆ ನಟಿ ಮೇಘನಾ ರಾಜ್ ಮಲಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಸಕ್ರಿಯರಾಗಿದ್ದಾರೆ.
ಇನ್ನು ನಟಿ ಮೇಘನಾ ರಾಜ್ ಚಿರು ನಿಧನದ ಬಳಿಕ ಚಿತ್ರರಂಗದಿಂದ ಕೊಂಚ ದೂರ ಉಳಿದು ಬಿಟ್ಟಿದ್ದರು. ಇದೀಗ ಮತ್ತೆ ಬಣ್ಣದ ಲೋಕಕ್ಕೆ ಕಮ್ ಬ್ಯಾಕ್ ಮಾಡಿರುವ ಮೇಘನಾ ರಾಜ್ ಅವರ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದ್ದಾರೆ.
ಮೇಘನಾ ರಾಜ್ ಅವರು ಇದೀಗ ಸಿನಿಮಾ ಶೂಟಿಂಗ್ ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇನ್ನು ಚಿರು ನಿಧನದ ಬಳಿಕ ತಮ್ಮ ಮಗ ರಾಯನ್ ಸಂಪೂರ್ಣ ಜಾವಾಬ್ದಾರಿಯನ್ನು ಮೇಘನಾ ವಹಿಸಿಕೊಂಡಿದ್ದು, ಮಗನ ಭವಿಷ್ಯ ರೂಪಿಸಲು ತುಂಬಾನೇ ಶ್ರಮ ಪಡುತ್ತಿದ್ದಾರೆ.
ಇನ್ನು ಇದೀಗ ಚಿರು ಅವರ ತಮ್ಮ ಧೃವ ಸರ್ಜಾ ಇದ್ದಕ್ಕಿದ್ದಂತೆ ಮೇಘನಾ ರಾಜ್ ಮನೆಗೆ ಬಂದು ರಾಯನ್ ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟಕ್ಕೂ ಧೃವ ಸರ್ಜಾ ಹೀಗೆ ಮಾಡಲು ಕಾರಣ ಏನು? ಏನಿದು ಸುದ್ದಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೋಡೋಣ ಬನ್ನಿ..
ಮೇಘನಾ ರಾಜ್ ಅವರಿಗೆ ತಮ್ಮ ಮಗ ರಾಯನ್ ಎಂದರೆ ತುಂಬಾ ಇಷ್ಟ. ಚಿರು ನಿಧನದ ಬಳಿಕ ಮೇಘನಾ ರಾಜ್ ಅವರಿಗೆ ರಾಯನ್ ತಮ್ಮ ಸರ್ವಸ್ವ ಆಗಿದ್ದಾನೆ. ಆ ಪುಟ್ಟ ಕಂದಮ್ಮನನ್ನು ನೋಡುತ್ತಾ ಮುಂದಿನ ಜೀವನದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ ನಟಿ ಮೇಘನಾ ರಾಜ್.
ಮೇಘನಾ ರಾಜ್ ಇದೀಗ ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಶೂಟಿಂಗ್ ಗಾಗಿ ಮೇಘನಾ ರಾಜ್ ಹೊರ ದೇಶಕ್ಕೆ ಹೋಗಬೇಕಾಗುತ್ತದೆ, ಇನ್ನು ರಾಯನ್ ಚಿಕ್ಕವನಾಗಿರುವುದರಿಂದ ನಟಿ ತಮ್ಮ ಮಗನನ್ನು ತಮ್ಮ ತಾಯಿ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ.
ಇದಕ್ಕೆ ಧೃವ ಸರ್ಜಾ ಮೇಘನಾ ಮನೆಗೆ ಬಂದು ರಾಯನ್ ನನ್ನ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ರಾಯನ್ ಗೆ ಅವರ ಚಿಕ್ಕಪ್ಪ ಧ್ರುವ ಸರ್ಜಾ ಎಂದರೆ ತುಂಬಾನೇ ಇಷ್ಟ. ಧ್ರುವ ಸರ್ಜಾ ಅವರನ್ನು ನೋಡಿದರೆ ಸಾಕು ಓಡಿ ಬಂದು ಅವರ ಬೆನ್ನ ಮೇಲೆ ಕೂತು ಅವರ ಗಡ್ಡ ಎಳೆಯುತ್ತಾನೆ.
ಆದರಿಂದ ಮೇಘನಾ ಇಲ್ಲವಾದರೂ ರಾಯನ್ ಹಠ ಮಾಡುವುದಿಲ್ಲ, ನಿಮಗೂ ಸಹ ರಾಯನ್ ಇಷ್ಟವಾಗಿದ್ದರೆ ಕಾಮೆಂಟ್ ಮಾಡಿ ತಿಳಿಸಿ.