ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಇದೀಗ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಯನ್ ರಾಜ್ ಸರ್ಜಾ ಅವರಿಗೆ ಜನ್ಮ ನೀಡಿದ ಬಳಿಕ ಮೇಘನಾ ರಾಜ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು.
ಮೇಘನಾ ಆ ಸಿನಿಮಾ ಘೋಷಣೆ ಮಾಡಿ ಹಲವಾರು ತಿಂಗಳುಗಳೇ ಕಳೆದು ಹೋಗಿದೆ ಆದರೆ ಆ ಸಿನಿಮಾದ ಬಗ್ಗೆ ಯಾವುದೇ ಅಪಡೆಟ್ ನೀಡಿಲ್ಲ. ಬಳಿಕ ಮೇಘನಾ ರಾಜ್ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಕಿರುತೆರೆಯ ರಿಯಾಲಿಟಿ ಷೋನಲ್ಲಿ ಮೇಘನಾ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.
ಡ್ಯಾನ್ಸಿಂಗ್ ಚಾಂಪಿಯನ್ ಷೋನ ಮೂಲಕ ನಟಿ ಮೇಘನಾ ಕಿರುತೆರೆ ಅಭಿಮಾನಿಗಳ ಮುಂದೆ ಬಂದಿದ್ದರು. ಪತಿ ಚಿರಂಜೀವಿ ಅಗಲಿಕೆಯ ನಂತರ ಮೇಘನಾ ಎಲ್ಲಿಯೂ ಸಹ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಯಾವುದೇ ಕಾರ್ಯಕ್ರಮದಲ್ಲೂ ನಟಿ ಮೇಘನಾ ಭಾಗಿಯಾಗುತ್ತಿರಲಿಲ್ಲ.
ಡ್ಯಾನ್ಸಿಂಗ್ ಷೋನ ಮೂಲಕ ಸರ್ಜಾ ಕುಟುಂಬದ ಜೊತೆಗೆ ನಟಿ ಮೇಘನಾ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಬಾರಿಗೆ ಒಂದು ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಎಂಟ್ರಿ ಕೊಟ್ಟ ಮೇಘನಾ ಕಿರುತೆರೆ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ನಟಿ ಮೇಘನ ರಿಯಾಲಿಟಿ ಶೋ ಮುಗಿಸಿ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಹೌದು ಸಾಧ್ಯ ನಟಿ ಮೇಘನಾ ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಆಕ್ಟೊಬರ್ ನಲ್ಲಿ ಅನೌನ್ಸ್ ಮಾಡಲಾಗಿದ್ದ ಸಿನಿಮಾಗೆ ಇದೀಗ ಮತ್ತೆ ಕಿಕ್ ಸ್ಟಾರ್ಟ್ ಕೊಡಲಾಗಿದೆ.
ಈ ಬಗ್ಗೆ ನಟಿ ಮೇಘನಾ ರಾಜ್ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಪಡಿಸಿದ್ದಾರೆ. ಜುಲೈ 7 ಒಂದು ಸಣ್ಣ ಆಲೋಚನೆ ನಿಜವಾಯಿತು. ನಾವು ಪ್ರಾಜೆಕ್ಟ್ ಅನ್ನು ಆಕ್ಟೊಬರ್ 17 2021 ರಲ್ಲಿ ಅನೌನ್ಸ್ ಮಾಡಿದ್ದೆವು, ಸಾಕಷ್ಟು ಚರ್ಚೆಗಳ ನಂತರ ಲುಕ್ ಟೆಸ್ಟ್ ಹಾಗೂ ಸ್ಕ್ರಿಪ್ಟ್ ಮರು ನಿರ್ಮಾಣ ನಂತರ ಒಟ್ಟಾಗಿ ಸೇರಿ ಕನಸ್ಸನ್ನು ಪ್ರಾರಂಭಿಸಿದ್ದೇವೆ.
ಈ ಸಿನಿಮಾ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಕ್ಯಾಮೆರಾ ರೋಲಿಂಗ್ ಆಕ್ಷನ್ ಎಂದು ಹೇಳಿದ್ದಾರೆ, ಅಂದಹಾಗೆ ಮೇಘನಾ ಅಂದಹಾಗೆ ಮೇಘನಾ ಅವರಿಗೆ ಕನ್ನಡದ ದೊಡ್ಡ ಸ್ಟಾರ್ ನಟರೊಬ್ಬರು ನಾಯಕನಟನಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ಆದರೆ ಆ ಸ್ಟಾರ್ ನಟ ಯಾರು ಎನ್ನುವುದರ ಬಗ್ಗೆ ಇನ್ನೂ ಯಾವುದೇ ಅಧಿಕೃತವಾದ ಮಾಹಿತಿ ದೊರೆಕಿಲ್ಲ. ಈ ಬಗ್ಗೆ ಶೀಘ್ರದಲ್ಲೆ ವಿಷಯ ಬಹಿರಂಗ ಪಡಿಸುವುದಾಗಿ ನಟಿ ಮೇಘನಾ ರಾಜ್ ತಿಳಿಸಿದ್ದಾರೆ. ಮೇಘನಾ ರಾಜ್ ಅವರ ಸಿನಿಮಾಗೆ ನೀವು ಸಹ ಆಲ್ ಧೀ ಬೆಸ್ಟ್ ಎಂದು ಕಾಮೆಂಟ್ ಮಾಡಿ ತಿಳಿಸಿ.